
1st August 2025
ಮಳವಳ್ಳಿ: ಪಿ ಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಕ್ಕೆರೆ ಶಾಲೆಯು ಜಿಲ್ಲೆಗೆ ಮಾದರಿಯಾಗಿದ್ದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಪಿಎಂ ಶ್ರೀ ಶಾಲೆಗಳಿದ್ದು ಅದರಲ್ಲಿ ಮಿಕ್ಕೆರೆ ಶಾಲೆಯನ್ನು ಉತ್ತಮ ಶಾಲೆ ಎಂದು ಆಯ್ಕೆಯಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ಶ್ರೀಮತಿ ಲಕ್ಷ್ಮಿ ಸಿ ವೈ ಪಿ ಸಿ ಎಸ್ ಎಸ್ ಕೆ ಮಂಡ್ಯ ರವರು ಅಭಿಪ್ರಾಯಪಟ್ಟರು .
ಪಿಎಂ ಶ್ರೀ ಶಾಲೆಯು ಕೇಂದ್ರ ಸರ್ಕಾರದ ಅನುದಾನಕ್ಕೆ ಒಳಗಾಗಿದ್ದು ಸಮರ್ಪಕವಾಗಿ ಅನುದಾನವನ್ನು ಬಳಸಿಕೊಂಡು ಗುಣಾತ್ಮಕ ಕಲಿಕೆಗೆ ಒತ್ತು ನೀಡಬೇಕು ಮಾದರಿ ಶಾಲೆಯಾಗಿ ಮಾಡಬೇಕೆಂದು ಸಲಹೆ ನೀಡಿದರು. ಶಾಲಾ ಆವರಣದಲ್ಲಿ ಆಯೋಜಿಸಿದ ಪಿಎಂ ಶ್ರೀ ಉತ್ತಮ ಶಾಲೆ ಆಯ್ಕೆಯಾದ ಮಿಕ್ಕೆರೆ ಶಾಲೆಯಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಿಗಳಾದ ಧರ್ಮೆಂದ್ರ ಪ್ರಧಾನ ರವರು ವಿಡಿಯೋ ಸಂವಾದದ ಮೂಲಕ ಮಾತನಾಡುವ ದೃಶ್ಯವನ್ನು ಪ್ರೊಜೆಕ್ಟರ್ ಮೂಲಕ ಇಲಾಖೆ ಅಧಿಕಾರಿಗಳು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಎಸ್ಡಿಎಂಸಿ ಸದಸ್ಯರುಗಳು ವೀಕ್ಷಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪಿ ಎಂ ಶ್ರೀ ಶಾಲೆಗಳಾಗಿ ಪರಿವರ್ತಿಸಿ ಶಾಲೆಗಳಿಗೆ ಮೂಲಭೂತ ಸೌಕರ್ಯ ತಂತ್ರಜ್ಞಾನ ಗುಣಮಟ್ಟದ ಶಿಕ್ಷಣ ಆಧುನಿಕ ಉಪಕರಣಗಳ ಮೂಲಕ ಶಾಲೆಯನ್ನು ಅಭಿವೃದ್ಧಿಪಡಿಸಿ ಮಾದರಿ ಶಾಲೆಯನ್ನಾಗಿ ಮಾಡಲು ಸಹಾಯಕವಾಗಿದೆ ಎಂದು ತಿಳಿಸಿದರು ಈ ನಿಟ್ಟಿನಲ್ಲಿ ಪಿ ಎಂ ಶ್ರೀ ಮಿಕ್ಕೆರೆ ಶಾಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಶಾಲೆಗೆ ಬೆಸ್ಟ್ ಸ್ಕೂಲ್ ಅವಾರ್ಡ್ ಬಂದಿರುವುದು ಸಂತೋಷವಾಗಿದೆ ಎಂದರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶಾಲೆಯನ್ನು ಅಭಿವೃದ್ಧಿ ಮಾಡಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡಬೇಕೆಂದು ಸಲಹೆ ನೀಡಿದರು
ಪಿಎಂ ಶ್ರೀ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಎಂ ಬಿ ನಾಗರತ್ನ ರವರು ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಮಂಡ್ಯ ಜಿಲ್ಲೆಯ ಒಂಬತ್ತು ಪಿಎಂ ಶ್ರೀ ಶಾಲೆಗಳಲ್ಲಿ ನಮ್ಮ ಮಿಕ್ಕೆರೆ ಶಾಲೆಯನ್ನು ಉತ್ತಮ ಶಾಲೆಯಾಗಿ ಆಯ್ಕೆ ಮಾಡಿರುವುದಕ್ಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು ಈ ಪ್ರಶಸ್ತಿ ಬರಲು ಕಾರಣಕರ್ತರಾದ ನನ್ನ ಶಾಲೆಯ ಶಿಕ್ಷಕ ವೃಂದ ಎಸ್ ಡಿ ಎಂ ಸಿ ಸಮಿತಿ ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರ ಮಾರ್ಗದರ್ಶನದಿಂದ ಸಾಧ್ಯವಾಗಿದೆ ನಮ್ಮ ಶಾಲೆಯಲ್ಲಿ ಉತ್ತಮವಾದ ಕಲಿಕ ವಾತಾವರಣವಿದ್ದು ಮಾನ್ಯ ಶಾಸಕರ ಅಪೇಕ್ಷೆಯಂತೆ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುತ್ತಾ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ ಇದರ ಜೊತೆಗೆ ಕಂಪ್ಯೂಟರ್ ಶಿಕ್ಷಣ ಕರಾಟೆ ಯೋಗ ಶಿಕ್ಷಣ ದೈಹಿಕ ಶಿಕ್ಷಣ ವಿಷಯವಾರು ಶಿಕ್ಷಕರು ಲಭ್ಯವಿದ್ದು ಶಿಸ್ತು ಸಮಯ ಪಾಲನೆಗೆ ಹೊತ್ತು ನೀಡಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಾ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಶಾಲೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಲಹೆ ಮಾರ್ಗದರ್ಶನದೊಂದಿಗೆ ಉತ್ತಮ ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದು ಮಾತನಾಡಿದರು.
ವಿದ್ಯಾರ್ಥಿಗಳು ನವದೆಹಲಿಯಲ್ಲಿ ನಡೆದ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಪ್ರೊಜೆಕ್ಟರ್ ಮೂಲಕ ಶಿಕ್ಷಕರು ಹಾಗೂ ಅಧಿಕಾರಿಗಳೊಂದಿಗೆ ವೀಕ್ಷಿಸಿದರು ಉತ್ತಮ ಶಾಲೆ ಎಂದು ಆಯ್ಕೆ ಮಾಡಿದ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರನ್ನು ಎಸ್ ಡಿಎಂಸಿ ಸಮಿತಿ ಸದಸ್ಯರು ಅಧ್ಯಕ್ಷರು ಪೋಷಕರು ಅಭಿನಂದಿಸಿ ಸಂತಸ ಪಟ್ಟರು
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮೇಶಕುಮಾರ್ ಎಸ್ ಇ ಸಿ ಓ ಪಿ ಎಮ್ ಶ್ರೀ ನೋಡಲು ಅಧಿಕಾರಿಗಳು ಸಿ ಆರ್ ಪಿ ಪ್ರಕಾಶ್ ವಿ ಕಿರಗಾವಲು ವೃತ್ತ ಸಹಶಿಕ್ಷಕರಾದ ಸೋಮಣ್ಣ ಎಚ್ಎಂ ಮೋಹನ ಗಂಗೋತ್ರಿ ದೀಪಕುಮಾರಿ ಕೆ ಎಸ್ ಸುಜಾತ ಡಿ ಅಮೃತಾ ಸಿ ಚುಂಚಣ್ಣ ಬಿ ಅತಿಥಿ ಶಿಕ್ಷಕರು ಪೋಷಕರು ಎಸ್ ಡಿ ಎಂ ಸಿ ಸದಸ್ಯರುಗಳು ಇಲಾಖೆ ಅಧಿಕಾರಿಗಳು ಹಾಜರಿದ್ದರು
ಮಿಕ್ಕೆರೆ ಶಾಲೆಗೆ ಪಿಎಂಶ್ರೀ ಉತ್ತಮ ಶಾಲೆಯ ಗರಿ
ಒಳ ಮೀಸಲಾತಿ ಜಾರಿಗೊಳಿಸಲು ಅರೆ ಬೆತ್ತಲೆ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಮಾದಿಗರಿಂದ ಭಾರಿ ಪ್ರತಿಭಟನೆ
ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ - ಕೃತಿ ಲೋಕಾರ್ಪಣೆ ನಮ್ಮ ಪರಿಸರದ ಜ್ಞಾನ ಪಡೆಯದೆ ವಿದೇಶದವರ ಅಧ್ಯಯನ ಏತಕ್ಕೆ -ಸಿ.ಎ.ಗೋಕುಲದಾಸ ಪೈ